ಅಮೆರಿಕದ ಜಾನಪದ ಪರಿಷತ್ತು
	ಜಾನಪದ ಅಧ್ಯಯನವನ್ನು ಪ್ರಥಮಕರ್ತವ್ಯವನ್ನಾಗಿ ಇಟ್ಟುಕೊಂಡು ಮೆಸಾಚುಸೆಟ್ಸ್‍ನ ಕೇಂಬ್ರಿeóïನಲ್ಲಿ ಜನ್ಮ ತಾಳಿತು (1888). ಇದಕ್ಕಾಗಿ ಒಂದು ವೈಜ್ಞಾನಿಕದೃಷ್ಟಿಯ ಪತ್ರಿಕೆಯನ್ನು ಪ್ರಕಟಿಸಬೇಕೆಂಬುದೂ ಆ ಮೂಲಕ ತೀವ್ರಗತಿಯಲ್ಲಿ ಕ್ಷಯಿಸುತ್ತಿರುವ ಅಮೆರಿಕದ ಜಾನಪದವನ್ನು ಸಂಗ್ರಹಿಸುವ, ಉಳಿಸುವ, ಅಧ್ಯಯನಿಸುವ ಹಾಗೂ ಪ್ರಕಟಿಸುವ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕೆಂಬುದೂ ಪರಿಷತ್ತಿನ ಉದ್ದೇಶಗಳಲ್ಲಿ ಸೇರಿದ್ದುವು. ಜಾನಪದ ಅಧ್ಯಯನವನ್ನು ಶಾಸ್ತ್ರೀಯವನ್ನಾಗಿಸುವುದರಲ್ಲಿ ಪರಿಷತ್ತಿನ ಪಾತ್ರ ಅಪಾರವಾದುದು. ಸಂಯುಕ್ತಸಂಸ್ಥಾನಗಳು ಮತ್ತು ಕೆನಡದ ಆದ್ಯಂತ ಅನೇಕ ಅಂಗಸಂಸ್ಥೆಗಳಿವೆ. ಪ್ರಪಂಚದ ನಾನಾಕಡೆಗಳಲ್ಲಿ ಸದಸ್ಯರಿದ್ದಾರೆ. ಜರ್ನಲ್ ಆಫ್ ಅಮೆರಿಕನ್ ಫೋಕ್‍ಲೋರ್ ಎನ್ನುವುದು ಪರಿಷತ್ತಿನ ಪತ್ರಿಕೆ. ಈಗ ಪತ್ರಿಕೆಯ (82)ನೆಯ ಸಂಪುಟ ನಡೆಯುತ್ತಿದೆ (1969). ಇದರೊಂದಿಗೆ ಸಾರಾಂಶಗಳ ಪುರವಣಿ ಮಾಲೆಯೊಂದನ್ನು ಪರಿಷತ್ತು ಪ್ರಕಟಿಸುತ್ತಿದೆ. ಪರಿಷತ್ತು ತನ್ನ ವಾರ್ಷಿಕ ಅಧಿವೇಶನವನ್ನು ಎರಡು ಮೂರು ದಿನ ಪ್ರಕಟಿಸುತ್ತದೆ. ಪಂಡಿತ ಪ್ರಬಂಧಗಳ ಮಂಡನೆ, ಚರ್ಚೆ, ವಿನಿಮಯಗಳಿಗೆ ಅಧಿವೇಶನದಲ್ಲಿ ಅವಕಾಶವಿದೆ.

(ಎಚ್.ಎಂ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ